108 ಶ್ರೀ ಮಾತಾ ಅಮೃತಾನಂದಮಯಿ ಅಷ್ಟೋತ್ತರ ಶತನಾಮ
೦೦೧. ಓಂ ಪೂರ್ಣಬ್ರಹ್ಮ ಸ್ವರೂಪಿಣ್ಯೈ ನಮಃ
[…ಪೂರ್ಣಳೂ, ಬ್ರಹ್ಮಸ್ವರೂಪಿಯೂ ಆದ ಅಮ್ಮನಿಗೆ ನಮಸ್ಕಾರ.]
೦೦೨. ಓಂ ಸಚ್ಚಿದಾನಂದ ಮೂರ್ತಯೇ ನಮಃ
[…ಸಚ್ಚಿದಾನಂದ ಮೂರ್ತಿಗೆ;]
೦೦೩. ಓಂ ಆತ್ಮಾರಾಮಾಗ್ರಗಣ್ಯಾಯೈ ನಮಃ
[…ಆತ್ಮದಲ್ಲಿ ಸ್ಥಿತರಾಗಿ ಆರಾಮವಾದವರಲ್ಲಿ ಅಗ್ರಗಣ್ಯಳಾದವಳಿಗೆ;]
೦೦೪. ಓಂ ಯೋಗಲೀನಾಂತರಾತ್ಮನೇ ನಮಃ
[…ಪರಮಾತ್ಮನಲ್ಲಿ ಐಕ್ಯಳಾದ ಮನಃಸ್ಥಿತಿ ಇರುವವಳಿಗೆ;]
೦೦೫. ಓಂ ಅಂತರ್ಮುಖ ಸ್ವಭಾವಾಯೈ ನಮಃ
[…ಅಂತರ್ಮುಖಿಯಾದ ಸ್ವಭಾವ ಇರುವವಳಿಗೆ;]
೦೦೬. ಓಂ ತುರ್ಯತುಂಗ ಸ್ಥಲೀಜುಷೇ ನಮಃ
[…ಅತ್ತ್ಯುನ್ನತವಾದ ತುರೀಯಾವಸ್ಥೆಯಲ್ಲಿ ನೆಲೆಸಿರುವವಳಿಗೆ;]
೦೦೭. ಓಂ ಪ್ರಭಾಮಂಡಲ ವೀತಾಯೈ ನಮಃ
[…ಪ್ರಭಾಮಂಡಲದಿಂದ ಸುತ್ತುವರಿದವಳಿಗೆ;]
೦೦೮. ಓಂ ದುರಾಸದ ಮಹೋಜಸೇ ನಮಃ
[…ಪಡೆಯಲು ಸುಲಭವಲ್ಲದ ಮಹಾ ಓಜಸ್ಸನ್ನು ಪಡೆದವಳಿಗೆ;]
೦೦೯. ಓಂ ತ್ಯಕ್ತ ದಿಗ್ವಸ್ತು ಕಾಲಾದಿ ಸರ್ವಾವಚ್ಛೇದ ರಾಶಯೇ ನಮಃ
[…ದಿಕ್ಕು, ವಸ್ತು, ಕಾಲ ಮೊದಲಾದ ಮಿತಿಗಳನ್ನು ಮೀರಿದವಳಿಗೆ;]
೦೧೦. ಓಂ ಸಜಾತೀಯ ವಿಜಾತೀಯ ಸ್ವೀಯ ಭೇದ ನಿರಾಕೃತೇ ನಮಃ
[…ಸಜಾತಿ, ವಿಜಾತಿ ಅಥವಾ ಸ್ವೀಯ ಎಂಬ ಭೇದಗಳನ್ನು ನಿರಾಕರಿಸಿದವಳಿಗೆ; ]